ಹೊನ್ನಹಳ್ಳಿ ಸಮೀಪ ಬೊಲೆರೋ ಪಿಕಪ್ ಮಗುಚಿ 5 ಜನರಿಗೆ ಪೆಟ್ಟು

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ: ತಾಲೂಕಿನ ಹೊನ್ನಹಳ್ಳಿ ಗ್ರಾಮದ ಸಮೀಪ ಬೊಲೆರೋ ಪಿಕಪ್ ಮಗುಚಿ, ಚಾಲಕನ ಜೊತೆಗೆ 5 ಜನರಿಗೆ ತೀವ್ರವಾದ ಪೆಟ್ಟಾಗಿದೆ.

ತಾಲೂಕಿನ ದೊಡ್ಡ ಮೋಳೆ ಗ್ರಾಮದ ದರ್ಶನ್, ಈತನ ಜೊತೆಗಿದ್ದ ಕೂಲಿ ಕೆಲಸಕ್ಕೆ ಹೋಗಿದ್ದ ಶೇಷ, ಉಮೇಶ, ಅಭಿ ಹಾಗೂ ಗೋವಿಂದ ಎಂಬುವರಿಗೆ ಪೆಟ್ಟಾಗಿರುವುದು. ಇವರು ಎಳನೀರು ಸಂಗ್ರಹ ಮಾಡಲು ಅಮಚವಾಡಿ ಗ್ರಾಮದಿಂದ ಅರಕಲವಾಡಿ ಗ್ರಾಮಕ್ಕೆ ಹೋಗಿ, ವಾಪಸ್ ಬರುವಾಗ ಹೊನ್ನಳ್ಳಿ ಗ್ರಾಮದ ರಸ್ತೆಯ ತಿರುವಿನಲ್ಲಿ ವಾಹನದ ಆಕ್ಸಲ್ ಕಟ್ಟಾಗಿ ರಸ್ತೆಯ ತಿರುವಿನಲ್ಲಿ ಮಗುಚಿ ಬಿದ್ದ ಪರಿಣಾಮ ವಾಹನದಲ್ಲಿ ಇದ್ದವರಿಗೆ ಗಾಯಗಳಾಗಿವೆ.

ಅಪಘಾತದ ವಿಚಾರ ತಿಳಿಯುತ್ತಿದ್ದಂತೆ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಗಾಯಳುಗಳನ್ನು ಚಾಮರಾಜನಗರ ಸಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಿದರು.

Share this Article
Leave a comment