ಆರ್.ಟಿ .ಇ ಅಗತ್ಯ ಕ್ರಮಕ್ಕೆ ಡಾ.ನವೀನ್ ಮೌರ್ಯ ಆಗ್ರಹ 

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ: 9 ಮತ್ತು 10ನೇ ತರಗತಿಯ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಆರ್ ಟಿ ಇ ಅವಕಾಶಗಳನ್ನು ಮುಂದುವರಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಡಾ.ನವೀನ್ ಮೌರ್ಯ ರವರು ಒತ್ತಾಯಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭದಲ್ಲಿ ಸರ್ಕಾರವು 9 ಮತ್ತು 10ನೇ ತರಗತಿಯ ಎಸ್ಸಿ ಎಸ್ಟಿ ಆರ್ ಟಿ ಇ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಮುಂದುವರಿಸುವುದಾಗಿ ಘೋಸಿಷಿತ್ತು, ಆದರೆ, ಖಾಸಗಿ ಶಾಲಾ ಸಂಘಟನೆಗಳು ಈ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು, ಇದಕ್ಕೆ ತಡೆಯಜ್ಞೆ ಆದೇಶ ಹೊರ ಬಂದಿದೆ.ಇದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಕಂಗಲಾಗಿದ್ದಾರೆ.

ಮದ್ಯ ವರ್ಷದಲ್ಲೇ ಹೆಚ್ಚಿನ ಶುಲ್ಕವನ್ನು ಭರಿಸಲು ಸಾಧ್ಯವಾಗದ ಕಾರಣದಿಂದ ಬಲವಂತವಾಗಿ ವರ್ಗಾವಣೆಗೊಳ್ಳುವ ಭೀತಿ ಎದುರಾಗಿದೆ. ಸಂವಿಧಾನ,ಎಸ್ಸಿ ಎಸ್ಟಿ ಗಳ ಪರ ಎಂದು ಸದಾ ಬೊಬ್ಬೆ ಹೊಡೆಯುವ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

Share this Article
Leave a comment