*ದೇವರತ್ನ ಪೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಎಂ.ಶಿವಪ್ರಸಾದ್ ಸಲಹೆ
*ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಕಾರ್ಯಾಗಾರ
ಚಾಮರಾಜನಗರ, ಆ.30: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗುತ್ತಿರುವ ವಿದ್ಯಾರ್ಥಿಗಳು ನಿರಂತರವಾಗಿ ಅಧ್ಯಯನ ಮಾಡುವುದರಿಂದ ಯಶಸ್ಸು ಸಾಧಿಸಬಹುದಾಗಿದೆ ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಆಡಳಿತ), ವಕೀಲರು ಹಾಗೂ ದೇವರತ್ನ ಪೌಂಡ್‌ಶೇನ್ ಸಂಸ್ಥಾಪಕ ಅಧ್ಯಕ್ಷರಾದ ಎಂ.ಶಿವಪ್ರಸಾದ್ ಸಲಹೆ ನೀಡಿದರು.
ನಗರದ ವರನಟ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ದೇವರತ್ನ ಪೌಂಡೇಶನ್ ವತಿಯಿಂದ ಭಾನುವಾರ ಆಯೋಜಿಸಿದ್ದ 2026-27 ನೇ ಸಾಲಿನ ಯುಪಿಎಸ್ ಸಿ, ಕೆಪಿಎಸ್ ಸಿ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಡೆದ ಉಚಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ದೇವರತ್ನ ಪೌಂಡೇಶನ್ ವತಿಯಿಂದ ಪ್ರಾಯೋಗಿಕ ಪರೀಕ್ಷೆ ನಡೆಸಿ, ಆ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಯುಪಿಎಸ್ಸಿ, ಕೆಪಿಎಸ್ಸಿ ಪರೀಕ್ಷೆಗಳನ್ನು ಎದುರಿಸಲು ಉಚಿತವಾಗಿ ಪರೀಕ್ಷಾ ಸಾಮಗ್ರಿಗಳು ಹಾಗೂ ವಸತಿ ಸೌಲಭ್ಯ ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಯುಪಿಎಸ್ಸಿ, ಐಎಎಸ್, ಐಪಿಎಸ್ ನಂತಹ ಪರೀಕ್ಷೆಗಳಲ್ಲಿ ಉತ್ತೀರ್ಣರಾದರೆ ಇತರೆ ಯಾವುದೇ ಪರೀಕ್ಷೆಗಳನ್ನು ಪಾಸ್ ಮಾಡಲು ಸುಲಭವಾಗುತ್ತದೆ. ಈ ನಿಟ್ಟಿನಲ್ಲಿ ಸ್ಪರ್ಧಾರ್ಥಿಗಳಿಗೆ ಇಂತಹ ಅವಕಾಶವನ್ನು ಒದಗಿಸಲಾಗುತ್ತಿದೆ ಎಂದರು.
ಪ್ರತಿಭೆ ಎಂಬುವುದು ಪ್ರತಿಯೊಬ್ಬರ ಸ್ವತ್ತಾಗಿದ್ದು, ನಿರಂತರವಾಗಿ ಅಧ್ಯಯನ ಮಾಡುವುದರಿಂದ ಯಾರಾದರೂ ಯಶಸ್ಸು ಸಾಧಿಸಬಹುದಾಗಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ, ವಿಶ್ವೇಶ್ವರಯ್ಯ ಅವರಂತಹ ಜ್ಞಾನಿಗಳ ಆದರ್ಶ ತತ್ವಗಳನ್ನು ಎಲ್ಲಾ ವಿದ್ಯಾರ್ಥಿಗಳು ಪಾಲಿಸಬೇಕು ಎಂದು ತಿಳಿಸಿದರು.
ದೇವರತ್ನ ಪೌಂಡೇಶನ್ ಎಲ್ಲಾ ವರ್ಗಗಳ ಸ್ವತ್ತಾಗಿದೆ. ನಮ್ಮ ಈ ಫೌಂಡೇಶನ್ ಕಳೆದ ಎರಡು-ಮೂರು ವರ್ಷಗಳಿಂದ ಅನೇಕ ಕೆಲಸಗಳನ್ನ ಮಾಡುತ್ತಿದೆ. ಆದರೆ ನಮ್ಮ ದೇವರತ್ನ ಪೌಂಡೇಶನ್ ವತಿಯಿಂದ ಇದೇ ಮೊದಲ ಬಾರಿಗೆ ಯುಪಿಎಸ್ ಸಿ, ಕೆಪಿಎಸ್ ಸಿ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಕಾರ್ಯಾಗಾರವನ್ನು ನಡೆಸುತ್ತಿದ್ದೇವೆ. ಇಂತಹ ಪರೀಕ್ಷೆಗಳ ಕಾರ್ಯಗಾರಗಳನ್ನು ಎಲ್ಲರೂ ಬಳಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಾಬು ಜಗಜೀವನ ರಾಮ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಹೆಚ್.ಹೆಚ್.ನಾಗರಾಜು, ಅರಕಲವಾಡಿ ಜವರಯ್ಯ, ಹಸಗೂಲಿ ಸಿದ್ದಯ್ಯ ಕಾಂತರಾಜು, ದೇವರತ್ನ ಫೌಂಡೇಶನ್ ವಿಭಾಗೀಯ ಅಧ್ಯಕ್ಷ ಶಿವಮೂರ್ತಿ ಸೇರಿದಂತೆ ಇತರರು ಮಾತನಾಡಿದರು. ಈ ವೇಳೆ ದೇವರತ್ನ ಪೌಂಡೇಶನ್ ವತಿಯಿಂದ ಕಾರ್ಯಗಾರಕ್ಕೆ ಆಗಮಿಸಿದ ಎಲ್ಲಾರಿಗೂ ಸ್ಪರ್ಧಾ ಅರಿವು ಎಂಬ ಪುಸ್ತಕವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅರುಂಧತಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಜವರಯ್ಯ ಅರಕಲವಾಡಿ, ಉಪಾಧ್ಯಕ್ಷ ಹಸಗೂಲಿ ಸಿದ್ದಯ್ಯ, ಮುಖಂಡ ಮೂಡಹಳ್ಳಿ ಮೂರ್ತಿ, ಶಿಕ್ಷಕ ಕಾಂತರಾಜು, ಸಂಘದ ವಿಭಾಗೀಯ ಅಧ್ಯಕ್ಷ ಶಿವಮೂರ್ತಿ, ನೌಕರರ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಬಾಬು ಜಗಜೀವನ ರಾಮ್ ಸಂಘಟನೆಗಳ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಸಮುದ್ರ ಎಂ.ಶಿವಕುಮಾರ್, ಸಮಾಜದ ಮುಖಂಡರಾದ ರಾಮು, ರಾಕ್ ಗಿರೀಶ್, ಸಿದ್ದು, ಸ್ವಾಮಿ ನಾಯಕ್, ಡ್ಯಾನ್ಸರ್ ಸೀನು, ಕ್ವಾಲಿಟಿ ನವೀನ್, ನಾಗೇಶ್, ಸಿದ್ದಪ್ಪಾಜಿ, ಚನ್ನಬಸವಯ್ಯ, ಮಹದೇವಯ್ಯ, ಶಂಕರ್, ಸುಂದರ್, ದೇವರಾಜು, ಲಿಂಗರಾಜು, ಶ್ರೀನಿವಾಸ್, ಸಾಗರ್, ಶ್ರೀಕಂಠ, ಪುನೀತ್, ಮೂಡಳ್ಳಿ ಶಂಕರ್, ಚನ್ನಬಸವಯ್ಯ, ಅರಕಲವಾಡಿ ಮಹಾದೇವಯ್ಯ, ಸ್ವಾಮಿ, ಶಿವಕುಮಾರ್, ಸುರೇಶ್, ಅಮಚವಾಡಿ ಪುಟ್ಟಸ್ವಾಮಿ ಹಾಗೂ ಇತರರು ಹಾಜರಿದ್ದರು.