ಆ.8 ಮತ್ತು 9 ರಂದು ಬುದ್ಧ ಪ್ರಜ್ಞಾ ಮತ್ತು ಮಕ್ಕಳ ಮೈತ್ರಿ ಕಾರ್ಯಕ್ರಮ

ಮಣಿಕಂಠ ಜನತಾ ರಾಯಭಾರಿ
2 Min Read

ಚಾಮರಾಜನಗರ: ಮಕ್ಕಳ ಮನಸ್ಸಿನಲ್ಲಿ ಏಕಾಗ್ರತೆಯನ್ನು ಮತ್ತು ಭವಿಷ್ಯದ ಕುಶಲತೆಯನ್ನು ಗುರುತಿಸಿ ಗ್ರಾಮೀಣ ಮಕ್ಕಳಿಗೆ ವೇದಿಕೆಯನ್ನು ಅವಕಾಶವನ್ನು ಕಲ್ಪಿಸುವ ನಿಟ್ಟಿನಲ್ಲಿ ಆ.8 ಮತ್ತು 9 ರಂದು ಬುದ್ಧ ಪಜ್ಞಾ ಮತ್ತು ಮಕ್ಕಳ ಮೈತ್ರಿ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಸಿ.ಎಂ.ಕೃಷ್ಣಮೂರ್ತಿ ತಿಳಿಸಿದರು.

ನಗರದ ವರನಟ ಡಾ.ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಆ.8 ಮತ್ತು 9 ರಂದು ಎರಡು ದಿನಗಳ ಕಾಲವೂ ನಿರಂತರವಾಗಿ ಕಾರ್ಯಕ್ರಮ ನಡೆಯಲಿದೆ. 2024 ರಿಂದ ಮೈಸೂರಿನ ಭಾಗದಲ್ಲಿ ಆರಂಭಗೊಂಡ ಈ ಬುದ್ಧ ಪ್ರಜ್ಞಾ ಮಕ್ಕಳ ಅಭಿಯಾನವು ಎರಡನೇ ಆವೃತ್ತಿಯಾಗಿ ಚಾಮರಾಜನಗರದಲ್ಲಿ ನಡೆಯಲಿದ್ದು, ರಾಜ್ಯದ ಸುಮಾರು 25 ಜಿಲ್ಲೆಗಳಿಂದ ಮಕ್ಕಳು ಇಲ್ಲಿಗೆ ಆಗಮಿಸುತ್ತಿದ್ದಾರೆ. ಚಾಮರಾಜನಗರ ಜಿಲ್ಲೆಯ ಐದು ತಾಲೂಕುಗಳ ಸುತ್ತಮುತ್ತಲಿಂದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಈ ಕಾರ್ಯಕ್ರಮವು ಸಂಪೂರ್ಣವಾಗಿ ಮಕ್ಕಳ ಮೈತ್ರಿ ಮತ್ತು ಸಾಮಾಜಿಕ ಪ್ರಜ್ಞೆ, ವಿವಿಧ ಭಾಷೆ, ಭಾವಗಳಲ್ಲಿ ಸಾಮರಸ್ಯವನ್ನು ಮೂಡಿಸುವ ಒಂದು ಅಪರೂಪದ ಕಾರ್ಯಕ್ರಮ ಆಗಿದೆ. 32ಕ್ಕೂ ಹೆಚ್ಚಿನ ಸ್ಪರ್ಧೆಗಳನ್ನು ಇಲ್ಲಿ ಏರ್ಪಡಿಸಲಾಗಿದೆ. ಸ್ಪರ್ಧೆಯಲ್ಲಿ ಗೆದ್ದವರಿಗೆ ನಗದು ಬಹುಮಾನ ಹಾಗೂ ಗೌರವ ಸಮರ್ಪಣೆಯನ್ನು ಏರ್ಪಡಿಸಲಾಗಿದ ಎಂದರು.

ಗಾಯನ, ನೃತ್ಯ, ಪ್ರಬಂಧ, ಭಾಷಣ, ಚರ್ಚೆ, ಭರತನಾಟ್ಯ, ಪೇಪರ್ ಕಟಿಂಗ್, ಐತಿಹಾಸಿಕ ಸ್ಥಳಗಳ ಗುರುತಿಸುವಿಕೆ, ಸ್ಪೆಲ್ಲಿಂಗ್ ಕಾಂಪಿಟೇಶನ್, ಕ್ವಿಜ್, ವೇಷಭೂಷಣ, ಪ್ರಬಂಧ ಮಂಡನೆ, ಭರತನಾಟ್ಯ, ಹಾಗೂ ಡಾ. ಅಂಬೇಡ್ಕರ್ ಅವರ ಹಾಗೂ ಗೌತಮ ಬುದ್ಧರ ಬಗೆಗಿನ ವಿಶೇಷ ಜ್ಞಾನವನ್ನು ಪ್ರಸ್ತುತಪಡಿಸಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಭಾರತೀಯ ಬೌದ್ಧ ಮಹಾಸಭಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಾಗಶಿಲ್ಪ ಉಮೇಶ್ ಕುದರ್ ಮಾತನಾಡಿ, ಬುದ್ಧರ ಮೌಲ್ಯಗಳು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳು ಹಾಗೂ ಈ ನೆಲದ ವಿವಿಧ ದಾರ್ಶನಿಕರ ಆಲೋಚನೆಗಳನ್ನು ಸಮಾಜದಲ್ಲಿ ಬಿತ್ತುವ ಮತ್ತು ಸಾಮಾಜಿಕ ಸಾಮರಸ್ಯದಲ್ಲಿ ಮಕ್ಕಳನ್ನು ತೊಡಗಿಸುವ ಒಂದು ಅಪರೂಪದ ಪ್ರಯತ್ನ ಇದಾಗಿದೆ. ಯಹಳ್ಳಿ ಹಳ್ಳಿಗಳಲ್ಲಿ ಬಡ ಮಕ್ಕಳು ಮತ್ತು ಆರ್ಥಿಕ ಬಲಹೀನ ಮಕ್ಕಳಿಗೆ ಜಾಗತಿಕ ಮಟ್ಟದ ಕೌಶಲ್ಯಗಳನ್ನು ಉಚಿತವಾಗಿ ತುಂಬುವ ಧ್ಯೇಯವನ್ನು ಈ ಕಾರ್ಯಕ್ರಮ ಹೊಂದಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಬೌದ್ಧ ಬಿಕ್ಕುಗಳು ಮತ್ತು ಜ್ಞಾನಪ್ರಕಾಶ್ ಸ್ವಾಮೀಜಿ ಅವರ ಸಮ್ಮುಖದಲ್ಲಿ, ಜಿಲ್ಲೆಯ ವಿವಿಧ ಮಾಜಿ ಮತ್ತು ಹಾಲಿ ಶಾಸಕರುಗಳು ಸ್ವಯಂ ಪ್ರೇರಣೆಯಿಂದ ಭಾಗವಹಿಸಿ ಮಕ್ಕಳಿಗೆ ಶುಭ ಕೋರಲಿದ್ದಾರೆ. ಮನೋರಕ್ಕಿತ ಬಂತೇಜಿ, ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಸುಬ್ಬು ಹೊಲಯರ್ ಅವರು ಬುದ್ಧ ವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಗೋಷ್ಠಿಯಲ್ಲಿ ಜಾನಪದ ಕಲಾವಿದ ಸಿ‌.ಎಂ.ನರಸಿಂಹಮೂರ್ತಿ, ಬಿಎಸ್ಪಿ ನಾಗಯ್ಯ, ಕೃಷ್ಣಮೂರ್ತಿ, ಚಿಕ್ಕಣ್ಣ ಹಗಿನವಾಳು ಹಾಜರಿದ್ದರು.

Share this Article
Leave a comment