ಕನ್ನಡದ ಸಮಗ್ರ ಬೆಳವಣಿಗೆಗೆ ರಾಮಕೃಷ್ಣ ಹೆಗಡೆ ಕೊಡುಗೆ ಅಪಾರ- ಸುರೇಶ್ ಎನ್.ಋಗ್ವೇದಿ 

ಮಣಿಕಂಠ ಜನತಾ ರಾಯಭಾರಿ
2 Min Read

ಚಾಮರಾಜನಗರ, ಆ.25: ಕರ್ನಾಟಕದಲ್ಲಿ ಕನ್ನಡದ ಅಭಿವೃದ್ಧಿ ಬೆಳವಣಿಗೆ ಮತ್ತು ಆಡಳಿತದಲ್ಲಿ ಕನ್ನಡ ಅನುಷ್ಠಾನಗೊಳ್ಳಲು ರಾಮಕೃಷ್ಣ ಹೆಗಡೆ ಅವರ ಪಾತ್ರ ಅಪಾರವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಹಾಗೂ ಸಂಸ್ಕೃತಿ ಚಿಂತಕ ಸುರೇಶ್ ಎನ್‌.ಋಗ್ವೇದಿ ತಿಳಿಸಿದರು.

ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮೊಟ್ಟ ಮೊದಲ ಬಾರಿಗೆ ಕನ್ನಡ ಕಾವಲು ಸಮಿತಿಯನ್ನು ರಚಿಸುವ ಮೂಲಕ ಕನ್ನಡದ ಸಮಗ್ರ ಅಭಿವೃದ್ಧಿಗೆ ಕೊಡಗೆ ನೀಡಿದ ರಾಮಕೃಷ್ಣ ಹೆಗಡೆಯವರು ಅದರ ಮೊದಲ ಅಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರನ್ನು ನೇಮಕ ಮಾಡಿದರು. ರಾಮಕೃಷ್ಣ ಹೆಗಡೆ ಇಡೀ ದೇಶದ ಹಿರಿಯ ರಾಜಕಾರಣಿಯಾಗಿ ರಾಜಕೀಯ ಮುತ್ಸದಿಯಾಗಿ, ಭಾರತೀಯ ರಾಜಕಾರಣದಲ್ಲಿ ತಮ್ಮದೇ ಆದ ವೈಶಿಷ್ಟವಾದ ಗುಣವನ್ನು ಹೊಂದಿದವರು. ಇವರ ಭಾಷೆ ಜ್ಞಾನ, ಮತ್ತು ಚಿಂತನೆಯ ವಿವರಣೆಗಳು ಅಪಾರವಾದದ್ದು ಎಂದರು.

ಕನ್ನಡ ಭಾಷೆಯ ಸಂಪೂರ್ಣ ಬಳಕೆ ಮತ್ತು ಹಿತಾಸಕ್ತಿಯನ್ನು ಕಾಪಾಡುವ ಬದ್ಧತೆಯೊಂದಿಗೆ ಕನ್ನಡ ಕಾವಲು ಸಮಿತಿ ರಚನೆ ಮಾಡಿದ ಹೆಗಡೆಯವರು ತದನಂತರ ಇಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರವಾಗಿ ಇಂದು ಕನ್ನಡದ ಕೆಲಸವನ್ನು ಮಾಡುತ್ತಿವೆ ಎಂದು ಹೇಳಿದರು.

ರಾಮಕೃಷ್ಣ ಹೆಗಡೆಯವರ ಚಿಂತನೆಯ ದೃಷ್ಟಿಯಲ್ಲಿ ಆಡಳಿತದಲ್ಲಿ ಕನ್ನಡ ಭಾಷೆ ಕಡ್ಡಾಯ ಅನುಷ್ಠಾನವಾಗಲು ಸಾಧ್ಯವಾಯಿತು. ಕವಿಗಳು ಸಾಹಿತಿಗಳು ಚಿಂತಕರು ಬರಹಗಾರರು ಕನ್ನಡ ಸಾಹಿತ್ಯ ಬೆಳವಣಿಗೆ ಎಷ್ಟು ಮುಖ್ಯವೋ ಅಷ್ಟೇ ಪರಿಣಾಮಕಾರಿಯಾದಂತ ಆಡಳಿತಗಾರರ ಪ್ರೋತ್ಸಾಹ ಮತ್ತು ಕಾರ್ಯಾಂಗದ ಪ್ರೋತ್ಸಾಹಗಳು ತುಂಬಾ ಅಗತ್ಯವಾಗಿದೆ.. ಹೆಗಡೆ ಯವರು ಚಾಮರಾಜನಗರಕ್ಕೆ ಹಲವಾರು ಬಾರಿ ಭೇಟಿದ್ದಾರೆ ಎಂದು ಋಗ್ವೇದಿ ತಿಳಿಸಿದರು.

ಬರಹಗಾರ ಲಕ್ಷ್ಮಿನರಸಿಂಹ ಮಾತನಾಡಿ, ಆಡಳಿತದಲ್ಲಿ ಪಾರದರ್ಶಕತೆ ಭ್ರಷ್ಟಾಚಾರವನ್ನು ತಡೆಗಟ್ಟಲು ಲೋಕಾಯುಕ್ತ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಆಡಳಿತದಲ್ಲಿ ಶುದ್ಧತೆ ತರುವ ಪ್ರಯತ್ನವನ್ನು ಮಾಡಿದ್ದಾರೆ. ಪಂಚಾಯತ್ ರಾಜ್ ಕಾಯಿದೆ ಜಾರಿಗೆ ತಂದು ಇಡೀ ದೇಶಕ್ಕೆ ಮಾದರಿಯಾದರು. ಎರಡು ರೂ, ಗೆ ಎರಡು ಕೆಜಿ ಅಕ್ಕಿ ನೀಡಿ ಬಡವರಿಗೆ ಅನುಕೂಲ ಮಾಡಿಕೊಟ್ಟರು ಎಂದರು.

1983ರಿಂದ 1988ರವರಗೆ ಹಲವಾರು ಬಾರಿ ಭೇಟಿ ನೀಡಿ ನಗರದ ಅಭಿವೃದ್ಧಿ ಗೆ ರಾಚಯ್ಯ ನವರ ಮೂಲಕ ನಡೆಸಿಕೊಟ್ಟರು. ಅಬ್ದುಲ್ ನಜೀರ್ ಸಾಬ್, ಎಚ್ ಡಿ ದೇವೇಗೌಡ, ಬಿ.ರಾಚಯ್ಯ, ಬಿ.ಎಲ್.ಶಂಕರ್ ಮುಂತಾದವರು ಇವರ ಜೊತೆ ಕಾರ್ಯನಿರ್ವಹಿಸಿದವರು ಎಂದರು.

ಕಾರ್ಯಕ್ರಮದಲ್ಲಿ ಮಾಜಿನಗರ ಸಭಾ ಸದಸ್ಯ ಪದ್ಮ ಪುರುಷೋತ್ತಮ್ ಮಾತನಾಡಿದರು. ಎಲ್.ಶಿವಲಿಂಗಮೂರ್ತಿ, ಬಿ.ಕೆ.ಆರಾಧ್ಯ, ರವಿಚಂದ್ರ ಪ್ರಸಾದದ್ ಕಹಳೆ, ಸರಸ್ವತಿ ಹಾಜರಿದ್ದರು.

Share this Article
Leave a comment