ಕೆ.ಎಸ್.ಆರ್.ಟಿ.ಸಿ ಬೈಕ್ ಡಿಕ್ಕಿ, ಸ್ಥಳದಲ್ಲೇ ಸೈಕಲ್ ಸವಾರ ಸಾವು

ಮಣಿಕಂಠ ಜನತಾ ರಾಯಭಾರಿ
1 Min Read

ಯಳಂದೂರು: ಯರಿಯೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 209 ಬಳಿ ಕೆ ಎಸ್ ಆರ್ ಟಿ ಸಿ, ಬಸ್ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.

ಯರಿಯೂರು ಗ್ರಾಮದ ನಂಜಶೆಟ್ಟಿ(65) ಎಂಬುವವರು ಸೈಕಲ್ ನಲ್ಲಿ ರಸ್ತೆಯಿಂದ ಉಪ್ಪಾರಬೀದಿ ಕಡೆಗೆ ಹೋಗುವಾಗ ಕೆ ಎಸ್ ಆರ್ ಟಿ ಸಿ ಬಸ್( ಕೆ 10-0229) ಚಾಮರಾಜನಗರ ದಿಂದ ಕೊಳ್ಳೇಗಾಲ ಕ್ಕೆ ಅತೀ ವೇಗದಲ್ಲಿ ತೆರಳುತ್ತಿರುವಾಗ ಸವಾರನಿಗೆ ಡಿಕ್ಕಿ ಹೊಡೆದಿದೆ.

ತಕ್ಷಣ ಸವಾರನ್ನು ಯಳಂದೂರು ತಾಲ್ಲೂಕು ಆಸ್ಪತ್ರೆ ರವಾನಿಸಲಾಯಿತು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಸ್ಥಳದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಸುಬ್ರಮಣ್ಯ ಹಾಗೂ ಸಬ್ ಇನ್ಸ್ಪೆಕ್ಟರ್ ಕರಿಬಸಪ್ಪ ಹಾಜರಿದ್ದು ವಿಚಾರಣೆ ಮಾಡಿ ಪ್ರಕರಣ ದಾಖಲಿಸಿಕೊಂಡರು. ಮೃತವ್ಯಕ್ತಿಯನ್ನು ಶವವನ್ನು ಚಾಮರಾಜನಗರ ಸೀಮ್ಸ್ ಆಸ್ಪತ್ರೆಗೆ ಸಾಗಿಸಲಾಯಿತು.

Share this Article
Leave a comment