ಶಾಸಕ ಪುಟ್ಟರಂಗಶೆಟ್ಟಿ ವಿರುದ್ಧ ಕಮೆಂಟ್, ದಲಿತರೊಬ್ಬರ ಬಂಧನ 

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ: ಮಸಣಾಪುರದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ವಿರುದ್ಧ ಕಮೆಂಟ್ ಮಾಡಿರುವ ದಲಿತರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಯಳಂದೂರು ಪೊಲೀಸ್ ಠಾಣೆ ಮಂಜುನಾಥ ಸಿ.ಹೆಚ್.ಸಿ-277 ರವರು ದಿನಾಂಕ 18-06-2026 ರಂದು ನೀಡಿದ ವರದಿಯಲ್ಲಿ ಸಾಮಾಜಿಕ ಜಾಲತಾಣದ ಮಾಧ್ಯಮಗಳಲ್ಲಿ ಜ್ಯೋತಿಗೌಡನಪುರ ಗ್ರಾಮದ ವೀರಣ್ಣ ವೀರು ಎಂಬ ವ್ಯಕ್ತಿ ತನ್ನ ಫೇಸ್‌ಬುಕ್ ಐಡಿಯಲ್ಲಿ ಯಳಂದೂರು ತಾಲ್ಲೂಕಿನ ಮಸಣಾಪುರ ಗ್ರಾಮದಲ್ಲಿ ನಡೆದ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಕಿಡಿಗೇಡಿಗಳು ಅಪಮಾನ ಮಾಡಿರುವ ವಿಚಾರವಾಗಿ ಪ್ರಜಾನುಡಿ ಡಿಜಿಟಲ್ ಎಂಬ ಫೇಸ್‌ಬುಕ್ ಖಾತೆಯಲ್ಲಿ ನ್ಯೂಸ್ ಪ್ರಚಾರವಾಗಿದ್ದು, ಅದರ ಕಮೆಂಟ್ ಬಾಕ್ಸ್‌ನಲ್ಲಿ Veeranna veeru ಎಂಬ ಫೇಸ್ ಬುಕ್ ಖಾತೆಯಿಂದ ಅವಹೇಳನಕಾರಿಯಾಗಿ ಕಾಮೆಂಟ್ ಹಾಕಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದರು.

ಈ ಸಂಬಂದ ವೀರಣ್ಣ ವೀರು ಎಂಬ ವ್ಯಕ್ತಿ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಯಳಂದೂರು ಠಾಣಾ ಮೊ.ಸಂ: 105/2026 ರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು, ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ಖಾತೆಯಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದ ಆಸಾಮಿಯನ್ನು ದಿನಾಂಕ: 07-07-2026 ರಂದು ಪತ್ತೆಮಾಡಿ ದಸ್ತಗಿರಿಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಪ್ರಕರಣದ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಶಾಸಕರ ವಿರುದ್ಧ ಕಮೆಂಟ್ ಮಾಡಿದ್ದೆ ತಪ್ಪಾಯ್ತಾ? ಈ ಪ್ರಕರಣ ಸಂಬಂಧ “ಜನತಾ ರಾಯಭಾರಿ” ಮಾಧ್ಯಮದಿಂದ ಸಾಮಾಜಿಕ ಜಾಲತಾಣದ ಎಲ್ಲಾ ಕಾಮೆಂಟ್ ಗಳನ್ನು ಪರಿಶೀಲಿಸಲಾಯಿತು. ಆದರೆ ವೀರಣ್ಣ ವೀರು ಅವರ ಕಾಮೆಂಟ್ ಲಭ್ಯವಾಗಲಿಲ್ಲ. ಆದರೆ ವೀರಣ್ಣ ಅವರ ಹೆಸರು ನಮೂದಿಸಿ ಕೆಲವರು ಪ್ರತಿಕ್ರಿಯೆ ನೀಡಿರುವುದನ್ನು ಗಮನಿಸಿದಾಗ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ವಿರುದ್ಧ ವೀರಣ್ಣ ಅವರು ಕಾಮೆಂಟ್ ಮಾಡಿರುವ ಕಾರಣಕ್ಕೆ ಬಂಧನ ಮಾಡಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಎಲ್ಲವನ್ನೂ ಗಮನಿಸಿದರೇ ಮಸಣಾಪುರ ಪ್ರಕರಣದಲ್ಲಿ ಶಾಸಕರ ವಿರುದ್ಧ ಕಾಮೆಂಟ್ ಮಾಡಿರುವುದೇ ತಪ್ಪಾಯ್ತಾ? ಎಂಬ ಪ್ರಶ್ನೆ ಮೂಡುತ್ತದೆ. ಒಟ್ಟಾರೆಯಾಗಿ ಜಿಲ್ಲಾ ಪೊಲೀಸರು ಸಾಮಾಜಿಕ ಜಾಲತಾಣಗಳ ಮೇಲೆ ಹೆಚ್ಚಿನ ನಿಗಾ ವಹಿಸಿದ್ದು, ಕಾಮೆಂಟ್ ಮಾಡುವವರು ಎಚ್ಚರಿಕೆ ವಹಿಸಬೇಕಿದೆ.

Share this Article
Leave a comment