ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಕಾಂಪೌಂಡ್ ಬಳಿ ವಿದ್ಯುತ್ ಕಂಬಗಳು ಶಾಲೆಯ ಆವರಣಕ್ಕೆ ಬಾಗಿ ಭಾರೀ ಅನಾಹುತಕ್ಕೆ ಆಹ್ವಾನ ನೀಡುತ್ತಿದ್ದು, ಈ ಸಮಸ್ಯೆಯಿಂದ ಪೋಷಕರಲ್ಲಿ ಆತಂಕ ಉಂಟಾಗಿದೆ.
ಶಾಲೆಯ ಆವರಣದೊಳಗೆ ನಿರುಪಯುಕ್ತ ಕಟ್ಟಡವಿದ್ದು ಅದರೆ ಮೇಲೆ ಹಾದುವಾಗಿರುವ ವಿದ್ಯುತ್ ತಂತಿ ಜೋತು ಬಿದ್ದಿದೆ. ಪಕ್ಕದಲ್ಲಿಯೇ ನೇರಳೆ ಮರವಿದ್ದು, ಹಾಗೂ ತಡೆಗೋಡೆಯೂ ವಿದೆ ಏನಾದರೂ ವಿದ್ಯಾರ್ಥಿಗಳು ನೇರಳೆ ಹಣ್ಣು ಕೀಳುವುದಕ್ಕೆ ತಡೆಗೋಡೆಯ ಮೇಲೆ ಹತ್ತಿ ನಂತರ ಕಟ್ಟಡ ಏರಿದರೆ ಭಾರೀ ಅನಾಹುತಕ್ಕೆ ಎಡೆಮಾಡಿಕೊಡುತ್ತದೆ.
ಈ ಶಾಲೆ ತಾಲ್ಲೂಕಿನಲ್ಲಿಯೇ ಅತೀ ಹೆಚ್ಚು ವಿದ್ಯಾರ್ಥಿಗಳಿರುವ ಸರ್ಕಾರಿ ಪ್ರೌಢಶಾಲೆಯಾಗಿದೆ. ಈ ಸಮಸ್ಯೆ ಬಗ್ಗೆ ಎಸ್ ಡಿ ಎಂ ಸಿ ಮತ್ತು ಶಾಲೆಯ ಮುಖ್ಯೋಪಾಧ್ಯಾಯರು ಅನೇಕ ಭಾರೀ ಚೆಸ್ಕಾಂ ಗೆ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಏನಾದರೂ ಅನಾಹುತ ಸಂಭವಿದರೆ ನೇರಹೊಣೆ ಚೆಸ್ಕಾಂ ವಹಿಸಿಕೊಳ್ಳಬೇಕಾಗುತ್ತದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.