ಬ್ಯಾಂಕ್ ಗ್ರಾಹಕರಿಗೆ ಆರ್‍.ಬಿ.ಐ ಲೋಕಪಾಲ (ಓಂಬುಡ್ಸ್ಮನ್) ಯೋಜನೆ ಕುರಿತು ಜಾಗೃತಿ   

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ: ಭಾರತ್ ರಿಸರ್ವ್ ಬ್ಯಾಂಕ್ (ಆರ್‍ಬಿಐ) ಲೋಕಪಾಲರ ಕಚೇರಿ ವತಿಯಿಂದ ಬ್ಯಾಂಕ್ ಗ್ರಾಹಕರಿಗೆ ಆರ್‍.ಬಿ.ಐ ಏಕೀಕೃತ ಲೋಕಪಾಲ (ಓಂಬುಡ್ಸ್ಮನ್) ಯೋಜನೆ-2021 ಕುರಿತು ಜಾಗೃತಿ ಕಾರ್ಯಕ್ರಮವನ್ನು ಇತ್ತೀಚೆಗೆ ನಗರದಲ್ಲಿ ಆಯೋಜಿಸಲಾಗಿತ್ತು.

ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಇತ್ತೀಚೆಗೆ (ಜು.10) ನಡೆದ ಕಾರ್ಯಕ್ರಮದಲ್ಲಿ ಆರ್‍ಬಿಐ ಬ್ಯಾಂಕಿಂಗ್ ಲೋಕಪಾಲರ ಕಚೇರಿಯ ಬ್ಯಾಂಕ್ ವ್ಯವಸ್ಥಾಪಕರಾದ ಮಂಗಳಂ ವೆಂಕಟರಾಮನ್ ಅವರು ಮಾತನಾಡಿ ಬ್ಯಾಂಕ್‍ಗಳ ದೂರು ನಿವಾರಣಾ ವ್ಯವಸ್ಥೆ, ಗ್ರಾಹಕರ ಹಕ್ಕುಗಳು ಹಾಗೂ ಬ್ಯಾಂಕ್‍ಗಳಿಗೆ ಸಲ್ಲಿಸುವ ದೂರುಗಳನ್ನು ನಿಗದಿತ ಅವಧಿಯೊಳಗೆ ಪರಿಹರಿಸಿಕೊಳ್ಳುವ ಕುರಿತು ವಿವರಿಸಿದರು.

ಆರ್‍ಬಿಐ ಏಕೀಕೃತ ಲೋಕಪಾಲ (ಓಂಬುಡ್ಸ್ಮನ್) ಯೋಜನೆ-2021ರಡಿ ಲಭ್ಯವಿರುವ ದೂರು ಪರಿಹಾರ ವ್ಯವಸ್ಥೆ, ಆರ್‍ಬಿಐ ಸಿಎಂಎಸ್ (ಅomಠಿಟಚಿiಟಿಣ ಒಚಿಟಿಚಿgemeಟಿಣ Sಥಿsಣem) ಪೋರ್ಟಲ್ ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ದೂರು ಸಲ್ಲಿಸುವ ವಿಧಾನವನ್ನು ತಿಳಿಸಿಕೊಟ್ಟರು. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಡಿಜಿಟಲ್ ಬ್ಯಾಂಕಿಂಗ್ ವಂಚನೆಗಳಿಂದ ಸುರಕ್ಷಿತವಾಗಿರಲು ಗ್ರಾಹಕರು ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಾಗೃತಿ ಮೂಡಿಸಿದರು.

ಬಳಿಕ ನಡೆದ ಪ್ರಶ್ನೋತ್ತರ ಅಧಿವೇಶನದಲ್ಲಿ ಗ್ರಾಹಕರು ಕೇಳಿದ ವಿವಿಧ ಪ್ರಶ್ನೆಗಳಿಗೆ ಆರ್‍ಬಿಐ ಅಧಿಕಾರಿಗಳು ಸಮರ್ಪಕ ಉತ್ತರ ನೀಡಿದರು. ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಬಿ.ವಿ.ಉದಯಕುಮಾರ್, ಜಿಲ್ಲಾ ಮಾರ್ಗದರ್ಶಿ ವ್ಯವಸ್ಥಾಪಕರಾದ ಎಂ.ಎನ್ ಸುರೇಖಾ ಸೇರಿದಂತೆ ಭಾರತೀಯ ರಿಸರ್ವ್ ಬ್ಯಾಂಕ್‍ನ ಅಧಿಕಾರಿಗಳು ಹಾಗೂ ಎಸ್‍ಬಿಐ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ಆರ್‍ಬಿಐ ಏಕೀಕೃತ ಲೋಕಪಾಲ (ಓಂಬುಡ್ಸ್ಮನ್) ಯೋಜನೆ ಕುರಿತು ಮಾಹಿತಿ ಕರಪತ್ರಗಳು ಹಾಗೂ ಕಿರುಹೊತ್ತಿಗೆಗಳನ್ನು ಗ್ರಾಹಕರಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸುಮಾರು 200ಕ್ಕೂ ಹೆಚ್ಚು ಗ್ರಾಹಕರು ಭಾಗವಹಿಸಿದ್ದರು.

Share this Article
Leave a comment