ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಹಲಸು ಆಹಾರ ಮೇಳ

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ ಶ್ರೀ ಬಾಲಾಜಿ ಇವೆಂಟ್ಸ್ ವತಿಯಿಂದ ಜು.17,18 ಮತ್ತು 19 ರಂದು ಇದೇ ಮೊಟ್ಟ ಮೊದಲ ಬಾರಿಗೆ ಹಲಸು ಆಹಾರ ಮೇಳ ಹಾಗೂ ಸ್ವದೇಶಿ ಉತ್ಪನ್ನಗಳ ಮಾರಾಟ ಮೇಳವನ್ನು ಆಯೋಜಿಸಲಾಗಿದೆ.

ನಗರದ ಶ್ರೀಭ್ರಮರಾಂಭ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗಲಿದ್ದು, ರಾತ್ರಿ 9 ಗಂಟೆಯವರೆಗೂ ಹಲಸು ಆಹಾರ ಮೇಳ ನಡೆಯಲಿದೆ. ಈ ಮೇಳದಲ್ಲಿ ಹಲಸಿನಿಂದ ತಯಾರಿಸಿದ ಐಸ್ ಕ್ರೀಮ್, ಹೋಳಿಗೆ, ಹಲಸಿನ ಕಬಾಬ್, ಹಲಸಿನ ಜಿಲೇಬಿ, ಹಲಸಿನ ಬಿರಿಯಾನಿ ಈಗೆ ಹತ್ತು ಹಲವಾರು ವೆರೈಟಿ ಖಾದ್ಯಗಳು ದೊರೆಯಲಿದೆ. ಅದಲ್ಲದೇ ಸ್ವದೇಶಿ ವಸ್ತುಗಳಾದ ಖಾದಿ ಬಟ್ಟೆಗಳು, ಮಹಿಳೆಯರ ಆಭರಣಗಳು, ಚನ್ನಪಟ್ಟಣದ ಗೊಂಬೆಗಳು ಈಗೇ ವಿವಿಧ ಬಗೆಯ ವಸ್ತುಗಳು ಒಂದೇ ಸೂರಿನಡಿ ಲಭ್ಯವಾಗಲಿದೆ.

ಈ ಮೇಳ ಶುಕ್ರವಾರ ಪ್ರಾರಂಭವಾಗಿ ಭಾನುವಾರ ರಾತ್ರಿ ಅಂತ್ಯವಾಗಲಿದೆ. ಜಿಲ್ಲೆಯಲ್ಲಿ ಇದೇ ಮೊಟ್ಟಮೊದಲ ಬಾರಿಗೆ ಆಯೋಜಿಸಿರುವ ಈ ವಿಶೇಷ ಮೇಳದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಈ ಮೂಲಕ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹಲಸು ಆಹಾರ ಮೇಳದ ಆಯೋಕರಾದ ನವೀನ್ ಅವರು ಮನವಿ ಮಾಡಿದ್ದಾರೆ.

Share this Article
Leave a comment