ಚಾಮರಾಜನಗರ: ಮುಂದಿನ 2028 ರ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರದ ಹಿಂದುಳಿದ ಸಮುದಾಯದ ಅಭಿವೃದ್ದಿಗಾಗಿ ಮತ್ತು ಚಾಮರಾಜನಗರ ಮಾದರಿ ಕ್ಷೇತ್ರ ಮಾಡುವ ಸಲುವಾಗಿ ಹಾಗೂ ಅಭಿಮಾನಿಗಳ ಪ್ರೀತಿಗಾಗಿ ಚಾಮರಾಜನಗರ ವಿಧಾನ ಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಲು ಸಿದ್ದನಿದ್ದೇನೆ ಎಂದು ಮೈಸೂರಿನ ಮುಡಾ ಮಾಜಿ ಅಧ್ಯಕ್ಷ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಹೆಚ್.ಎನ್.ವಿಜಯ್ ಕುಮಾರ್ ತಿಳಿಸಿದರು.
ತಾಲೂಕಿನ ವೀರನಪುರ ಕ್ರಾಸ್ ಬಳಿ ಇರುವ ಬಣ್ಣಾರಿ ಅಮ್ಮನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ನನಗೂ ಚಾಮರಾಜನಗರಕ್ಕೂ ಕಳೆದ ಇಪ್ಪತೈದು ವರ್ಷಗಳಿಂದ ಅವಿನಭಾವ ಸಂಭಂದವಿದೆ. ಆ ಮೂಲಕ ಇಲ್ಲಿನ ಯುವ ಜನರು ವಿವಿಧ ಸಮುದಾಯದ ಮುಖಂಡರು ಹಾಗೂ ನನ್ನ ಅಭಿಮಾನಿಗಳು ಚಾಮರಾಜನಗರದಲ್ಲೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಎಂಬ ಒತ್ತಾಯ ಕೇಳಿ ಬರುತ್ತಿದೆ ಅವರೆಲ್ಲರ ಆಶಯಕ್ಕೆ ನಾ ಋಣಿಯಾಗಿ ಈ ಚಾಮರಾಜನಗರ ಕ್ಷೇತ್ರದ ಅಭಿವೃದ್ಧಿ ಮಾಡಬೇಕೆನ್ನುವ ಅಭಿಲಾಷೆ ನನ್ನದಾಗಿದೆ ಹಾಗೂ ಚಾಮರಾಜನಗರ ಕ್ಷೇತ್ರದ ಪ್ರತಿ ಗ್ರಾಮದಲ್ಲೂ ಎಲ್ಲರ ಸ್ನೇಹ ಭಾಂದವ್ಯ ಅನೇಕ ವರ್ಷಗಳಿಂದ ನನಗೆ ಇದೆ ಹಾಗೂ ಇಲ್ಲಿ ಗ್ರಾಮೀಣ ಪ್ರದೇಶದ ಸಮಸ್ಯೆಗಳೆಲ್ಲವನ್ನು ಬಲ್ಲವನಾಗಿದ್ದೇನೆ.

ಚಾಮರಾಜನಗರ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳು ಕಳೆದ ಅನೇಕ ವರ್ಷಗಳಿಂದಲೂ ಹಾಗೆ ಉಳಿದಿವೆ. ಆದ್ದರಿಂದ ಚಾಮರಾಜನಗರ ಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡಬೇಕೆನ್ನುವ ಮನಸ್ಸು ನನ್ನದಾಗಿದೆ. ಆ ಕಾರಣಕ್ಕಾಗಿ ನಮ್ಮ ಅಭಿಮಾನಿಗಳು ವಿವಿಧ ಸಮಾಜದ ಮುಖಂಡರು ಚಾಮರಾಜನಗರ ಕ್ಷೇತ್ರಕ್ಕೆ ನಿಮ್ಮ ಸೇವೆಯ ಅಗತ್ಯವಿದೆ ಎಂದು ಒತ್ತಾಯಿಸುತ್ತಿದ್ದಾರೆ ಎಂದರು.
ಇದೆ ಸಂಧರ್ಭದಲ್ಲಿ ಮಾತನಾಡಿದ ಕೆ ಪಿ ಸಿ ಸಿ ಮಾಜಿ ಸದಸ್ಯ ಬಳ್ಳಾರಿಯ ಯರ್ರಿಸ್ವಾಮಿ ನಮ್ಮ ವಿಜಯಕುಮಾರ್ ರವರಿಗೆ ರಾಜ್ಯಾಂದ್ಯಾಂತ ಅಪಾರ ಅಭಿಮಾನಿಗಳಿದ್ದಾರೆ ಇವರು ಹಿಂದುಳಿದ ವರ್ಗವನ್ನು ಪ್ರಧಿನಿಧಿಸುವ ವ್ಯಕ್ತಿ ಹಿಂದುಳಿದ ವರ್ಗಗಳ ಅಭಿವೃದ್ಧಿಯ ಬಗ್ಗೆ ಇವರಿಗೆ ಅಪಾರ ಕಾಳಜಿ ಇದೆ ಆದ್ದರಿಂದ ಮುಂದಿನ ದಿನದಲ್ಲಿ ಎಲ್ಲೆ ಆದರೂ ಸರಿ ವಿಜಯ್ ಕುಮಾರ್ ರವರು ವಿಧಾನಸಭೆಗೆ ಸ್ಪರ್ಧಿಸುವುದು ಖಚಿತ ಅದರಲ್ಲೂ ಚಾಮರಾಜನಗರದ ಮೇಲೆ ಅವರಿಗೆ ಅಪಾರ ಒಲವಿದೆ ಎಂದರು.
ಕಾರ್ಯಕ್ರಮವನ್ನು ಚಾಮರಾಜನಗರ ಜಿಲ್ಲಾ ವಿಜಯ್ ಕುಮಾರ್ ಅಭಿಮಾನಿ ಬಳಗ ಆಯೋಜಿಸಿತ್ತು. ಬಳಗದ ಅಧ್ಯಕ್ಷ ರಾಜೇಂದ್ರ, ರಘು ಮೇಸ್ತ್ರಿ , ಹಾಗೂ ನೂರಾರು ಸಂಖ್ಯೆಯಲ್ಲಿ ಚಾಮರಾಜನಗರದ ಅಭಿಮಾನಿಗಳು ಹಾಜರಿದ್ದು ಪಟಾಕಿ ಸಿಡಿಸಿ ಕೇಕ್ ಕತ್ತರಿಸಿ ಸಂಭ್ರಮಿಸಿದರು.
ಈ ಸಂಧರ್ಭದಲ್ಲಿ ವಿಜಯ್ ಕಮಾರ್ ರವರ ಆಪ್ತರಾದ ಹೆಮ್ಮರಗಾಲ ಸೋಮಣ್ಣ,ಮಿರ್ಲೆ ರಾಜೀವ್,ಮಂಡ್ಯ ಉಪ್ಪಾರ ಸಮಾಜದ ಮಹಿಳಾ ಅಧ್ಯಕ್ಷೆಯಾದ ನಾಗರತ್ನಮ್ಮ, ಮಾದೇಶ್ ಉಪ್ಪಾರ್, ಬಾಗಳಿ ರೇವಣ್ಣ, ಕೊಡಿಮೋಳೆ ಗೋವಿಂದ ಶೆಟ್ಟಿ, ಸೇರಿದಂತೆ ಅಪಾರ ಸಂಖ್ಯೆಯ ಯುವ ಅಭಿಮಾನಿಗಳು ಹಾಜರಿದ್ದರು.