ಶ್ರೀ ಕಾಳಿಕಾಂಬ ಕಾಲೋನಿಯಲ್ಲಿ ಬೋನಿಗೆ ಬಿದ್ದ ಚಿರತೆ 

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ: ತಾಲೂಕಿನ ಶ್ರೀ ಕಾಳಿಕಾಂಬ ಕಾಲೋನಿಯಲ್ಲಿ ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿಗೆ ಚಿರತೆ ಸೆರೆಯಾಗಿದೆ.

ಶ್ರೀ ಕಾಳಿಕಾಂಬ ಕಾಲೋನಿ ಹಾಗೂ ಕುಂಭೇಶ್ವರ ಕಾಲೋನಿಯ ವ್ಯಾಪ್ತಿಯ ಜಮೀನುಗಳಲ್ಲಿ ಹಲವಾರು ದಿನಗಳಿಂದ ಚಿರತೆಯೊಂದು ಓಡಾಡುತ್ತಾ, ಹಲವಾರು ಹಸು, ಮೇಕೆ ಮತ್ತು ಕೋಳಿಗಳನ್ನು ಬಲಿ ಪಡೆದಿತ್ತು. ಈ ಸಂಬಂಧ ಗ್ರಾಮಸ್ಥರು ಹಾಗೂ ರೈತರು ಚಿರತೆಯನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದರು.

ಅದರಂತೆ ಅರಣ್ಯ ಇಲಾಖೆ ಕಾಳಿಕಾಂಬ ಕಾಲೋನಿಯ ವ್ಯಾಪ್ತಿಯ ಜಮೀನೊಂದರಲ್ಲಿ ಬೋನ್ ಅಳವಡಿಸಿದ್ದರು. ಮಂಗಳವಾರ ರಾತ್ರಿ ಬೋನಿಗೆ ಚಿರತೆ ಸೆರೆಯಾಗಿದೆ. ಆದರೆ ಈ ಭಾಗದಲ್ಲಿ ಇನ್ನು ಎರಡು ಚಿರತೆಗಳು ಓಡಾಡುತ್ತಿದ್ದು, ಒಂದು ಚಿರತೆಯ ಸೆರೆಯಿಂದ ಗ್ರಾಮಸ್ಥರ ಆತಂಕ ದೂರವಾಗಿಲ್ಲ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆ ಸೆರೆಗೆ ಕ್ರಮವಹಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು‌.

Share this Article
Leave a comment