ಮಂಟೇಸ್ವಾಮಿ ಪೀಠಕ್ಕೆ 5 ಕೋಟಿ ಅನುದಾನಕ್ಕೆ ಮನವಿ

ಮಣಿಕಂಠ ಜನತಾ ರಾಯಭಾರಿ
2 Min Read

*ಅನುದಾನ ಕೊಡಿಸಲು ಕೋಳ್ಳೆಗಾಲ, ಹನೂರು, ಕೆ.ಆರ್.ನಗರ ಶಾಸಕರು ಭರವಸೆ

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಶ್ರೀ ಮಂಟೇಸ್ವಾಮಿ, ಶ್ರೀರಾಚಪ್ಪಾಜಿ ಮತ್ತು ಶ್ರೀ ಸಿದ್ದಪ್ಪಾಜಿ ಅಧ್ಯಯನ ಪೀಠಕ್ಕೆ ಸರ್ಕಾರ ಸುಮಾರು 5 ಕೋಟಿ ರೂ, ಅನುದಾನವನ್ನು ನೀಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಲಾಯಿತು.

ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ಮಳವಳ್ಳಿ ಮಂಟೇಸ್ವಾಮಿ ಮಠದ ಪೀಠಾಧಿಪತಿಗಳ ಕಚೇರಿಯಲ್ಲಿ ಮಂಟೇಸ್ವಾಮಿ ಪರಂಪರೆಯ ಕ್ಷೇತ್ರಗಳ ಅಭಿವೃದ್ಧಿ ಮತ್ತು ಪಂಕ್ತಿಸೇವೆಗೆ ಇದ್ದ ತಕರಾರು ಇತ್ಯಾರ್ಥ ಪಡಿಸಿ ಕರ್ನಾಟಕ ಉಚ್ಛನ್ಯಾಯಾಲಯ ನೀಡಿರುವ ತೀರ್ಪಿನ ಕುರಿತು ನಡೆದ ಸಭೆಯಲ್ಲಿ ಶಾಸಕರಲ್ಲಿ ಮನವಿ ಮಾಡಲಾಯಿತು.

ಮಂಟೇಸ್ವಾಮಿ ಮಠ ಮಳವಳ್ಳಿ ಆದಿಹೊನ್ನಾಯಕನ ಹಳ್ಳಿ, ಕಪ್ಪಡಿ ಕ್ಷೇತ್ರಗಳ ಪೀಠಾಧಿಪತಿಗಳಾದ ಶ್ರೀ ವರ್ಚಸ್ವಿ ಶ್ರೀಕಂಠ ಸಿದ್ಧಲಿಂಗರಾಜೇ ಅರಸು ಸ್ವಾಮಿ ಸಭೆ ಕರೆದಿದ್ದರು. ಮಂಟೇಸ್ವಾಮಿ ಪರಂಪರೆಯ ಚಿಕ್ಕಲ್ಲೂರು, ಕುರುಬನ ಕಟ್ಟೆ, ಕಪ್ಪಡಿ ಕ್ಷೇತ್ರಗಳನ್ನು ಪ್ರತಿನಿಧಿಸುವ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ, ಹನೂರು ಕ್ಷೇತ್ರದ ಶಾಸಕರು, ಎಂ.ಆರ್.ಮಂಜುನಾಥ್, ಕೆ.ಆರ್.ನಗರ ಶಾಸಕ ಡಿ.ರವಿಶಂಕರ್ ಭಾಗವಹಿಸಿದ್ದರು.

ಕಳೆದ ೧೦-೧೫ ವರ್ಷಗಳಿಂದ ಪಂಕ್ತಿಸೇವೆ ಪರ ಅದು ಪ್ರಾಣಿ ಬಲಿ ಅಲ್ಲ. ಆಹಾರ ಸಂಸ್ಕೃತಿ, ಬಹು ಸಂಖ್ಯಾತರ ಆಚರಣೆ ಮತ್ತು ಪರಂಪರೆ ಎಂಬುದಾಗಿ ನ್ಯಾಯಾಲಯದಲ್ಲಿ ಹೋರಾಟ ನಡೆಸಿದ ಮಂಟೇಸ್ವಾಮಿ ಪರಂಪರೆ ರಕ್ಷಣೆ ಹೋರಾಟ ಸಮಿತಿ ಅಧ್ಯಕ್ಷ ಉಗ್ರನರಸಿಂಹೇಗೌಡ ಕಾರ್ಯದರ್ಶಿ ಶಂಭುಲಿಂಗಸ್ವಾಮಿ, ಸಮಿತಿಯ ಸಂಶೋಧಕ, ಮೈಸೂರು ವಿ.ವಿ.ಮಂಟೇಸ್ವಾಮಿ ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಶಂಕನಪುರ ಮಹಾದೇವ ಭಾಗವಹಿಸಿದ್ದರು.

ಉಚ್ಛ ನ್ಯಾಯಾಲಯ ನೀಡಿರುವ ತೀರ್ಪು: ಪಂಕ್ತಿಸೇವೆ-ಪ್ರಾಣಿಬಲಿಯಲ್ಲ. ಪರಂಪರೆಯಲ್ಲಿ ಬಲಿಪೀಠವೂ ಇರುವುದಿಲ್ಲ. ಎಂಬುದರ ಆಧಾರದ ಮೇಲೆ ನೀಡಲಾಗಿದೆ. ಮುಂದೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ, ಮುಜುರಾಯಿ ಇಲಾಖೆ, ಸಂಬಂಧಪಟ್ಟ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ, ಶಾಸಕರು ಕೋರ್ಟ್ ತೀರ್ಪನ್ನು ಪಾಲಿಸುವಂತೆ ಕ್ರಮ ಕೈಗೊಳ್ಳಲು ಚರ್ಚಿಸಲಾಯಿತು. ಹಾಗೇ ಚಿಕ್ಕಲ್ಲೂರು, ಕುರುಬನಕಟ್ಟೆ, ಕಪ್ಪಡಿ, ಮುಂತಾದ ಪರಂಪರೆಯ ಕ್ಷೇತ್ರಗಳ ಅಭಿವೃದ್ಧಿಗೆ ಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಲು ನಿರ್ಣಯಿಸಲಾಯಿತು.

ಮೈಸೂರು ವಿವಿ ಮಂಟೇಸ್ವಾಮಿ ಅಧ್ಯಯನ ಪೀಠ ಮಂಟೇಸ್ವಾಮಿ ಪರಂಪರೆಯ ತತ್ವ ಸಂದೇಶಗಳು ಪ್ರಚಾರ ಮಾಡಲು ಯೋಜನೆ ರೂಪಿಸಬೇಕಿದೆ. ನೀಲಗಾರ ವೇಶ, ವಿಚಾರ ಸಂಕಿರಣ ಪುಸ್ತಕ ಪ್ರಕಟಣೆ ಕೈಗೊಳ್ಳಬೇಕು. ಅದಕ್ಕೆ ಈಗಿರುವ ಪೀಠದ ಇಡುಗಂಡು ಸಾಲುವುದಿಲ್ಲ. ಹಾಗಾಗಿ ಶಾಸಕರು ಮುತುವರ್ಜಿ ವಹಿಸಬೇಕೆಂದು ಚರ್ಚಿಸಲಾಯಿತು. ಇದಕ್ಕೆ ಸ್ಪಂದಿಸಿದ ಶಾಸಕರು ಕೂಡಲೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮಂಟೇಸ್ವಾಮಿ ಪೀಠಕ್ಕೆ ೫ ಕೋಟಿ ರೂ, ಅನುದಾನ ಕೋರುವುದಾಗಿ ಭರವಸೆ ನೀಡಿದ್ದಾರೆ.

Share this Article
Leave a comment