ಅನೈತಿಕ ಸಂಬಂಧ; ಕೊಕ್ಕನಹಳ್ಳಿ ಯುವಕನೊಬ್ಬನ ಕೊಲೆ 

ಮಣಿಕಂಠ ಜನತಾ ರಾಯಭಾರಿ
0 Min Read

ಚಾಮರಾಜನಗರ: ತಾಲೂಕಿನ ಕೊಕ್ಕನಹಳ್ಳಿ ಗ್ರಾಮದಲ್ಲಿ ಅನೈತಿಕ ಸಂಬಂಧದ ವಿಚಾರವಾಗಿ ಯುವಕನೊಬ್ಬನ ಕೊಲೆ ಮಾಡಲಾಗಿದೆ.

ಕೊಕ್ಕನಹಳ್ಳಿ ಗ್ರಾಮದ ನಿವಾಸಿ ಮಹೇಶ್ (26) ಕೊಲೆಯಾದವನು. ಅದೇ ಗ್ರಾಮದ ನಿವಾಸಿ ಕುಮಾರಸ್ವಾಮಿ ಎಂಬುವವರು ಕೊಲೆ ಮಾಡಿದ್ದಾನೆ. ಕುಮಾರಸ್ವಾಮಿ ಅವರ ಅವರ ತಂಗಿಯೊಂದಿಗೆ ಮಹೇಶ್ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದ ಎಂದು ಶಂಕಿಸಲಾಗಿದ್ದು, ಆಗಾಗಿ ಮಹೇಶ್ ಎಂಬುವವನನ್ನು ಕೊಲೆ ಮಾಡಲಾಗಿದೆ.

ಸ್ಥಳಕ್ಕೆ ಎಎಸ್ಪಿ, ಡಿವೈಎಸ್ಪಿ ಹಾಗೂ ರಾಮಸಮುದ್ರ ಪೂರ್ವ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಿಮ್ಸ್ ಆಸ್ಪತ್ರೆಗೆ ರವಾನಿಸಿದರು. ಈ ಸಂಬಂಧ ರಾಮಸಮುದ್ರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share this Article
Leave a comment