ಬೆಂಗಳೂರು: ಪಶು ವೈದ್ಯಕೀಯ ಹಾಗೂ ಸೇವೆಗಳ ಇಲಾಖೆಯ ಆಯುಕ್ತರಾಗಿರುವ ಸಿ.ಟಿ.ಶಿಲ್ಪಾನಾಗ್ ಅವರಿಗೆ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ(ಕೆಎಸ್ಐಸಿ) ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.
ಕರ್ನಾಟಕ ಸರ್ಕಾರ ಐಎಎಸ್, ಐಎಎಫ್ ಅಧಿಕಾರಿಗಳನ್ನು (ಇಂದು) ಸೋಮವಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಪಶು ವೈದ್ಯಕೀಯ ಹಾಗೂ ಸೇವೆಗಳ ಇಲಾಖೆಯ ಆಯುಕ್ತರಾಗಿರುವ ಸಿ.ಟಿ.ಶಿಲ್ಪಾನಾಗ್ ಅವರಿಗೆ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ(ಕೆಎಸ್ಐಸಿ) ವ್ಯವಸ್ಥಾಪಕ ನಿರ್ದೇಶಕರಾಗಿ ಹೆಚ್ಚುವರಿ ಕಾರ್ಯಭಾರ ವಹಿಸಲಾಗಿದೆ.
ಕೆಎಸ್ಐಸಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಝಹೀರಾ ನಸೀಂ ಅವರನ್ನು ಕಲಬುರಗಿ ಪ್ರಾದೇಶಿಕ ಆಯುಕ್ತರ ಹುದ್ದೆಯಲ್ಲಿ ಮುಂದುವರೆಸಲಾಗಿದೆ.ಎಲೆಕ್ಟ್ರಾನಿಕ್ಸ್ ಡೆಲಿವರಿ ಆಫ್ ಸಿಟಿಜನ್ಸ್ ಸರ್ವೀಸ್ ( ಇಡಿಸಿಎಸ್) ನಿರ್ದೇಶಕರಾಗಿರುವ ಭೋಯಾರ್ ಹರ್ಷಲ್ ನಾರಾಯಣರಾವ್ ಅವರನ್ನು ಸಕಾಲ ಮಿಷನ್ನ ಹೆಚ್ಚುವರಿ ಮಿಷನ್ ನಿರ್ದೇಶಕ-2 ಹುದ್ದೆಯ ಹೆಚ್ಚುವರಿ ಕಾರ್ಯಭಾರ ನೀಡಲಾಗಿದೆ.
ಹಿರಿಯ ಐಎಫ್ಎಸ್ ಅಧಿಕಾರಿ, ಕರ್ನಾಟಕ ಅರಣ್ಯ ಇಲಾಖೆ ಎಚ್ಆರ್ಎಂಎಸ್ ಯೋಜನಾ ನಿರ್ದೇಶಕರಾದ ವಿಪಿನ್ ಸಿಂಗ್ ಅವರನ್ನು ಸಕಾಲ ಮಿಷನ್ ನಿರ್ದೇಶಕ-1 ಹುದ್ದೆಗೆ ನೇಮಕ ಮಾಡಿ ಆದೇಶ ಹೊರಡಿಸಿದೆ.