ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದ ಆನೆತಲೆ ದಿಂಬದ ಬಳಿ ಆಟೋ ಪಲ್ಟಿಯಾಗಿ, ಮಕ್ಕಳಿಗೆ ತೀವ್ರವಾದ ಪೆಟ್ಟಾಗಿದೆ.
ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದ ಕುಟುಂಬವೊಂದು ಮಕ್ಕಳೊಂದಿಗೆ ಆಟೋದಲ್ಲಿ ವಾಪಸ್ ಬರುವಾಗ ಆನೆತಲೆ ದಿಂಬದ ಸಮೀಪ ಆಟೋ ಪಲ್ಟಿಯಾಗಿದ್ದು, ಮೂವರು ಮಕ್ಕಳಿಗೆ ಪೆಟ್ಟಾಗಿದೆ. ಗಾಯಗೊಂಡವರು ಯಾರು ಎಂಬ ಮಾಹಿತಿ ಲಭ್ಯವಾಗಿಲ್ಲ.
ಅಪಘಾತ ಸಂಭವಿಸಿದ ಸ್ಥಳಕ್ಕೆ ತಕ್ಷಣ ಆಂಬುಲೆನ್ಸ್ ಬಂದಿದ್ದು, ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಳ್ಳೇಗಾಲ ಉಪವಿಭಾಗದ ಆಸ್ಪತ್ರೆ ರವಾನಿಸಲಾಗಿದೆ ಎಂದು ಪೊಲೀಸ್ ಮೂಲಗಳು “ಜನತಾ ರಾಯಭಾರಿ” ಗೆ ಮಾಹಿತಿ ನೀಡಿ
ದರು.