ವಿಕಲಚೇತನರ ಪಿಂಚಣಿ ಬಿಡುಗಡೆಗೆ ಒತ್ತಾಯಿಸಿ ಜು.16 ರಂದು ಪ್ರತಿಭಟನೆ 

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ: ವಿಕಲಚೇತನರ ಪಿಂಚಣಿ ಬಿಡುಗಡೆ ಹಾಗೂ ಇನ್ನಿತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜು.16 ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ರಮೇಶ್ ತಿಳಿಸಿದರು.

ನಗರದ ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಅಂದು ಬೆಳಗ್ಗೆ 10.30 ಗಂಟೆಗೆ ಮೆರವಣಿಗೆ ಮೂಲಕ ಸಾಗಿ ಶ್ರೀ ಭುವನೇಶ್ವರಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ವಿಕಲ ಚೇತನರ, ವಿಧವೆ ಮತ್ತು ವೃದ್ಯಾಪನ ವೇತನದ ಕುಟುಂಬ ವಾರ್ಷಿಕ ಆದಾಯದ ಮೀತಿಯನ್ನು 32,000 ಸಾವಿರ ರೂ, ಗಳನ್ನು ರದ್ದುಪಡಿಸಿ, 2ಲಕ್ಷ ರೂಗಳಿಗೆ ಹೆಚ್ಚಿಸಬೇಕು. ಈಗಾಗಲೇ ತಾತ್ಕಲಿಕವಾಗಿ ಸ್ಥಗೀತಗೊಂಡಿರುವ 3 ತಿಂಗಳ ವಿಕಲ ಚೇನರ ಪಿಂಚಣಿ ವೇತನವನ್ನು ಅತೀ ಶೀಘ್ರದಲ್ಲಿ ಬಿಡಗಡೆಗೊಳಿಸಬೇಕು. ಇವತ್ತಿನ ಎಲ್ಲಾ ಪದಾರ್ಥಗಳ ಬೆಲೆ ಏರಿಕೆ ದೃಷ್ಟಿಯಿಂದ ಈಗ ನೀಡುತ್ತಿರುವ ಮಾಸಾಶನದ ವೇತನ 800ರೂ, 1400ರೂಗಳನ್ನು ಸಮಾನವಾಗಿ 3000ರೂಗಳಿಗೆ ಏರಿಕೆ ಮಾಡಬೇಕು ಎಂದು ಆಗ್ರಹಿಸಿದರು.

ಮುಂಬರುವ ತಾಲ್ಲೂಕು ಮತ್ತು ಗ್ರಾಮಪಂಚಾಯಿತಿ ಚುನಾವಣೆಗಳಲ್ಲಿ ವೀಕಲಚೇತನರಿಗೆ ಸ್ಪರ್ಧೀಸಲು ರಾಜಕೀಯ ಮೀಸಲಾತಿಯನ್ನು ಕಲ್ಪಿಸಿ ಸಮಾನ ಅವಕಾಶ ನೀಡಬೇಕು. ನಿರುದ್ಯೋಗಿ ವಿಕಲ ಚೇತನರಿಗೆ ಖಾಲಿ ಇರುವ ಬ್ಯಾಕ್ ಲ್ಯಾಗ್ ಹುದ್ದೆಯನ್ನು ಭರ್ತಿ ಮಾಡಬೇಕು. ಈಗಿರುವ ರಿಯಾಯಿತಿ ಬಸ್ ಪಾಸ್‌ನ್ನು ರದ್ದುಪಡಿಸಿ ವಿಕಲ ಚೇತನರಿಗೂ ಶಕ್ತಿಯೋಜನೆಯಲ್ಲಿ ಪ್ರಯಾಣಿಸಲು ಘೋಷಣೆ ಮಾಡಬೇಕು ಎಂಬ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

ಗೋಷ್ಠಿಯಲ್ಲಿ ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಮಿತಿಯ ಎನ್.ಕೃಷ್ಣಮೂರ್ತಿ, ರೂಪೇಶ್, ಎಚ್.ಆರ್.ಜಯಮ್ಮ, ಸಿದ್ದಲಿಂಗಸ್ವಾಮಿ, ಸಿ.ಎಂ.ನಾಗರಾಜು, ಪರಮೇಶ್ ಹಾ

ಜರಿದ್ದರು.

Share this Article
Leave a comment